ಟ್ರಡ್‍ಮಿಲ್ ಟೆಸ್ಟ್ -
	ದೇಹದೊಳಕ್ಕೆ ಯಾವುದೇ ರೀತಿಯ ಸಾಧನವನ್ನು ಸೇರಿಸದೆ, ಕಿರೀಟಕ ಧಮನಿ ರೋಗ ಹೊಂದಿದವರÀ ಇಲ್ಲವೆ ಅದರ ಸುಳಿವು ಇದ್ದವರ ಹೃದಯದ ಕಾರ್ಯ ಸಾಮಥ್ರ್ಯವನ್ನು ಅರಿಯುವ, ರೋಗ ನಿದಾನ ಮಾಡುವ ಮತ್ತು ರೋಗದ ಮುನ್ನೋಟವನ್ನು ಅರಿಯುವ ಬಹು ಮುಖ್ಯ ಪರೀಕ್ಷೆ ಟ್ರಡ್ ಮಿಲ್ ಟೆಸ್ವ್..

	ದೈಹಿಕ ಶ್ರಮದ ಕಾಲದಲ್ಲಿ ಇಲ್ಲವೆ ವ್ಯಾಯಾಮದಲ್ಲಿ ಭಾಗವಹಿಸುತ್ತಿರುವ ಕಂಕಾಲ (ಸ್ಕೆಲೆಟರ್) ಸ್ನಾಯುಗಳು ಹೆಚ್ಚಿನ ಆಕ್ಸಿಜನ್ ಬೇಡಿಕೆಯನ್ನು ತೋರಿಸುತ್ತವೆÉ. ಅದನ್ನು ಹೃದಯ ತನ್ನ ವೇಗಗತಿಯನ್ನು ಹೆಚ್ಚಿಸಿ ಮತ್ತು ಹೆಚ್ಚು ಪ್ರಮಾಣದಲ್ಲಿ ರಕ್ತವನ್ನು ಹೊರತಳ್ಳಿ ಪೂರೈಸುತ್ತದೆ. ಕಿರೀಟಕ ಧಮನಿ ರೋಗವನ್ನು ಹೊಂದಿದವರಲ್ಲಿ, ಕಿರೀಟಕ ಧಮನಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಹೃದಯ ಸ್ನಾಯುವಿನ  ಆಕ್ಸಿಜೆನ್ ಬೇಡಿಕೆಯನ್ನು ಪೂರೈಸುವಲ್ಲಿ ಹೃದಯ ವಿಫಲವಾಗುತ್ತದೆ. ಅದರ ಪರಿಣಾಮವಾಗಿ ಹೃದಯ ಸ್ನಾಯು ಅರಕ್ತ (ಇಸ್ಕೀಮಿಯ) ಗೊಳ್ಳುತ್ತದೆ; ಅದು ಎದೆನೋವು ಮತ್ತು ಇ.ಸಿ.ಜಿ.ಯಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತೋರ್ಪಡಿಸುತ್ತದೆ.

	ಈ ರೀತಿಯ ಪರೀಕ್ಷೆಯನ್ನು ಎದೆನೋವು, ಎದೆ ಶೂಲೆ ಮತ್ತು ಹೃದಯಾಘಾತದ ನಂತರ ಕೈಗೊಳ್ಳಲಾಗುತ್ತದೆ. ಅದನ್ನು ಕೆಲಮೊಮ್ಮೆ ಆರೋಗ್ಯದಿಂದಿರುವ ವ್ಯಕ್ತಿಗಳಲ್ಲಿ ಕೈಕೊಂಡು ಇನ್ನೂ ಕಿರೀಟಕಧಯನಿಯ ರೋಗ ಲಕ್ಷಣಗಳು ಸ್ಪುಟಗೊಳ್ಳುವ ಮೊದಲೇ ಪತ್ತೆಮಾಡಲು ಕೈ ಕೊಳ್ಳಲಾಗುವುದು. ಇನ್ನು ಕೆಲವುಸಲ ಎದೆ ಡವಗುಟ್ಟುವಿಕೆÉ, ಶ್ರಮದ ನಂತರ ಉಬ್ಪಸ ಲಕ್ಷಣಗಳನ್ನು ತೋರ್ಪಡಿಸುವ ರೋಗಿಗಳಲ್ಲಿ ಕೈಕೊಳ್ಳಲಾಗುವುದು.

	ಉರುಳುಗಾಲಿ (ಟ್ರಡ್ ಮಿಲ್) ಯು ಚಲಿಸುತ್ತಿರುವಾಗ ವ್ಯಕ್ತಿಯು ಅದರ ಮೇಲಿನ ಹಾಸಿನ ಮೇಲೆ ಮುಂದು ಮುಂದಕ್ಕೆ ನಡೆÉಯಲು ಪ್ರಯತ್ನಿಸುತ್ತಾನೆ. ಹಂತಹಂತವಾಗಿ ಉರುಳುಗಾಲಿ ತಿರುಗುವಿಕೆಯ ವೇಗಗÀತಿಯನ್ನು ಮತ್ತು ಸಮತಟ್ಟಿನಿಂದ ಮೇಲಕ್ಕೆ ಎತÀ್ತರ ಮಾಡುತ್ತ ಬದಲಾವಣೆ ಮಾಡಲಾಗುತ್ತದೆ. ಅದರ ಮೇಲೆ ನಡೆಯುವ ವ್ಯಕ್ತಿಗೆ ಇ.ಸಿ.ಜಿ.ಯ ಲೀಕ್‍ಗಳನ್ನು ಅಂಟಿಸಿ ರೋಗಿಯು ನಡೆಯುತ್ತಿರುವಾಗ ಉಂಟಾಗುತ್ತಿರುವ ಬದಲಾವಣೆಗಳನ್ನು ಪರಿಶೀಲಿಸಲಾಗುತ್ತದೆ. ಬೇರೆ ಬಗೆಯ ಪರೀಕ್ಷೆÀ್ಷಗಳಿಗೆ ಹೋಲಿಸಿದಾಗ ಈ ಟೆಸ್ಟ್ ಸರಳ ಮತ್ತು ಕಡಿಮೆ ವೆಚ್ಚದ್ದು. ಹಾಗಾಗಿ ಅದು ತುಂಬ ಸಾಮಾನ್ಯವಾಗಿ ಉಪಯೋಗಿಸುವ ಒತ್ತಡ (ಸ್ಟ್ರೆಸ್) ಪರೀಕ್ಷೆಯೆನಿಸಿದೆ. ಅದು ರೋಗಿ ಪ್ರಕಟಪಡಿಸುವ ಲಕ್ಷಣಗಳು, ಹೃದಯ-ರಕ್ತನಾಳಗಳ ಕಾರ್ಯಕ್ರ್ರಿಯೆ ಮತ್ತು ಕಾರ್ಯZಟುವಟಿಕೆಯಲ್ಲಿ ನಿರತನಾಗಿದ್ದಾಗ ರಕ್ತ ಸಂಚಲನೆಯ ಪ್ರತಿಕ್ರಿಯೆಯ ವಿವರಗಳನ್ನು ನೀಡುತ್ತದೆ.

	ಈ ರೀತಿಯ ಒತ್ತಡ ಪರೀಕ್ಷ್ಷೆಯ ಕಾಲದಲ್ಲಿ ರೋಗಿ ತನ್ನ ಗರಿಷ್ಟ ಹೃದಯ ವೇಗಗತಿಯ ಶೇಕಡಾ 85 ರಷ್ಟನ್ನು ಹೊಂದಿದರೆ ಸಾಕು, ಅದು ರೋಗಿಯ ವಯಸ್ಸನ್ನು 220 ರಲ್ಲಿ ಕಳೆದರೆ ದೊರೆಯುವ ಲಬ್ಧಕ್ಕೆ ಸಮನೆನಿಸುತ್ತದೆ.

	ಸರಿಯಾದ ಹೃದಯ ಬಡಿತ ವೇಗಗತಿ ಬಂದಾಗ, ವ್ಯಾಯಾಮದ ಕಾಲದಲ್ಲಿ ಎದೆಶೂಲೆ ತಲೆ ದೋರಿದಾಗ, ಇ.ಸಿ.ಜಿ.ಯಲ್ಲಿ ಹೃದಯ ಅರಕ್ತತೆಯ ಬದಲಾವಣೆಗಳು ಗೋಚರಿಸಿದಾಗ, ಹೃದಯ ಬಡಿತÀದಲ್ಲಿ ಪ್ರಾಸಗೆಡಿಕೆÉ ತೋರಿಬಂದಾಗ ಮತ್ತು ರಕ್ತ ಒತ್ತಡ ಕುಸಿದಾಗ ಈ ಪರೀಕ್ಷೆಯನ್ನು ಕೂಡಲೇ ನಿಲ್ಲಿಸಬೇಕು.

	ಈ ಪರೀಕ್ಷೆ ಗರಿಷ್ಠಮಟ್ಟದ ಶ್ರಮವನ್ನು ಮುಟ್ಟಲಾಗದ ವ್ಯಕ್ತಿಗಳಲ್ಲಿ ನಿಖರ ಉತ್ತರವನ್ನು ನೀಡದು. ಹೃದಯದಲ್ಲಾಗುವ ಅರಕ್ತತತೆಯಿಂದ ಇ.ಸಿ.ಜಿ.ಯನ್ನು ಎಸ್-ಟಿ ಅಲೆಯ ಭಾಗದಲ್ಲಿ ತೋರಿಬರುವ ಬದಲಾವಣೆಗಳು ತುಂಬ ಮಹತ್ವದ ಅಂಶಗಳೆನಿಸಿವೆ. ಈ ಬಗೆಯ ಪರೀಕ್ಷೆ ಅಸ್ಥಿರ ಎದೆ ಶೂಲೆ ಹೊಂದಿದವರಲ್ಲಿ, ಈಚೆಗೆ ಹೃದಯಫಾತವಾದವರಲ್ಲಿ, ಡಿಜಿಟಾಲಿಸ್ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ ಸರಿಯಾಗಿ ನಿಯಂತ್ರಣಕ್ಕೆ ಬಾರದ ರಕ್ತ ಏರೊತ್ತಡ ಹೊಂದಿದ ರೋಗಿಗಳಲ್ಲಿ, ಎಡ ಹೃತ್ಕುಕ್ಷಿ ದೊಡ್ಡದಾಗಿ ಬೆಳವಣಿಗೆ ಹೊಂದಿದವರಲ್ಲಿ, ವಹನ ವ್ಯವಸ್ಥೆಯ ಎಡ ಕಟ್ಟಿನ ಕವಲಿನಲ್ಲಿ ಅಡ್ಡಿಯಿದ್ದಲ್ಲಿ, ವುಲ್ಪ್-ಪಾರ್ಕಿನ್‍ಸನ್-ವೈಟ್ ಲಕ್ಷಣ ಕೂಟ ಇರುವವರಲ್ಲಿ, ಕಿರಿದುಗೊಂಡ ಹೃತ್ಕವಾಟ (ಅಯೋರ್ಟ ಕವಾಟ) ಇರುವವರಲ್ಲಿ, ಹೃದಯ ಸೋಲುವಿಕೆ ಚಿಹ್ನೆಗಳನ್ನು ಪ್ರಕಟ ಪಡಿಸುತ್ತಿರುವವÀರಲ್ಲಿ ಮತ್ತು ಕೃತಕ ಗತಿ ರೂಪಕÀ (ಪೇಸ್ ಮೇಕರ್) ಹೊಂದಿದವರಲ್ಲಿ ಈ ಬಗೆಯ ಪರೀಕ್ಷೆ ಸಲ್ಲದು. ಏಕೆಂದರೆ ಈ ಬಗೆಯ ಪರೀಕ್ಷೆ ನೀಡುವ ಉತ್ತರದ ಮೌಲ್ಯ ಹೆಚ್ಚಿಲ್ಲ, ಬೀಟಾತಡೆ ಔಷಧಗಳು ಇಲ್ಲವೆ ಡಿಲ್ಟಿಯಾಜೆಂ ಸೇವಿಸುವವರಲ್ಲೂ ಈ ಪರೀಕ್ಷೆ ಉಪಯುಕ್ತಕರ ಉತ್ತರ ನೀಡುವಲ್ಲಿ ಅಸಮರ್ಥ, ಅದರಿಂದಾಗಿ ಈ ಪರೀಕ್ಷೆ ಕೈ ಕೊಳ್ಳ್ಳುವ 48 ಗಂಟೆಗಳ ಮೊದಲು ಆ ಔಷಧ ಸೇವನೆ ನಿಷಿದ್ಧ. ಆ ರೀತಿಯ ಔಷಧ ನಿಲುಗಡೆಗೆ ರೋಗಿಯ ಸ್ಥಿತಿ ತಾಳಿಕೊಳ್ಳುವಂತಿರಬೇಕು.

	ಈ ಬಗೆಯ ಸ್ಟ್ರೆಸ್ ಟೆಸ್ಟ್ ಕೊಡುವ ಉತ್ತರ ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚು ನಿರ್ದಿಷ್ಟ. ತುಂಬ ವಯಸ್ಸಾದವರಲ್ಲ್ಲೂ ಈ ಪರೀಕ್ಷೆ ಕೈಗೊಂಡಾಗ, ಹೃದಯ ರೋಗಕ್ಕಿಂತಲೂ, ಅವರ ವ್ಯಾಯಮ ಸಾಮಥ್ರ್ಯ ಕುಗ್ಗಿರುವುದಕ್ಕೆ ದೈಹಿಕ ದುರ್ಬಲತೆಯೇ ಕಾರಣವಾಗಿರುತ್ತದೆ.

	ಈ ಪರೀಕ್ಷೆ ಸಕಾರಾತ್ಮವಾಗಿ ಹೆಚ್ಚಿನ ಮಾಹಿತಿಕೊಡುವುದು ಈ ಸಂದರ್ಭಗಳಲ್ಲಿ; ಎದೆ ಶೂಲೆ ತೋರಿಬರುವುದು, ಎಸ್ ಟಿ ಭಾಗ 2 ಮಿ ಮೀ ಗಿಂತ ಹೆಚ್ಚು ಅಧೋಮುಖಿಯಾಗಿ ಹೆಚ್ಚು ಕಾಲ ಉಳಿಯುವುದು ಮತ್ತು ಇ.ಸಿ.ಜಿ.ಯ ಅನೇಕ ಲೀಡ್‍ಗಳಲ್ಲಿ ಎಸ್‍ಟಿ ಬದಲಾವಣೆಗಳು ತೋರಿಬರುವುದು.

	ಹೃದಯಘಾತ ಹೊಂದಿದ ರೋಗಿಗಳಲ್ಲಿ ಮತ್ತು ಆಂಜಿಯೋಪ್ಲಾಸ್ಟಿ ಇಲ್ಲವೆ ಬದಲಿ ರಕ್ತನಾಳ ನಾಟಿ ಹೊಂದಿದರಲ್ಲಿ ಈ ಪರೀಕ್ಷೆ ಅಷ್ಟೊಂದು ಉಪಯುಕ್ತಕರ ಉತ್ತರ ನೀಡುವುದಿಲ್ಲ. ಹೃದಯಘಾತ ಹೊಂದಿ ಚೇತರಸಿಕೊಂಡವರಲ್ಲಿ ಶ್ರಮದಾಯಕ ಸಾಮಥ್ರ್ಯ ಕಡಿಮೆಯಾಗಿರುವುದು ಮತ್ತು ಅಕುಂಚನ (ಸಿಸ್ಟ್ವಾಲಿಕ್) ರಕ್ತ ಒತ್ತಡ ಏರುವುದು ರೋಗದ ಮುನ್ನೋಟವನ್ನು ಹಿತಕರವಾಗಿ ತೋರಿಸುವುದಿಲ್ಲ.
	ಅನೇಕ ಬಾರಿ 3 ಕಿರೀಟಕ ಧಮನಿಗಳಲ್ಲಿ ರೋಗವಿದ್ದಾಗಲೂ ಇ.ಸಿ.ಜಿ ಸಹಜವಾಗಿ ಇರಬಹುದು. ಅಲ್ಲಿ ಟ್ರಡ್ ಮಿಲ್ ಟೆಸ್ಟ್‍ನ್ನು ಬಳಸಿ ಶ್ರಮದಾಯಕ ಕಾರ್ಯಕ್ಕೆ ದೇಹವನ್ನು ಒಡ್ಡಿದಾಗ ಹೃದಯದ ವೇಗಗÀತಿ ಹೊಂದುವುದನ್ನು ಕಾಣಲಾಗುತ್ತದೆ.
(ಪಿ.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ